Index   ವಚನ - 685    Search  
 
ಆತ್ಮಸಂಗವಾದ ಬಳಿಕ ಅರಿವ ಮೆರೆಯಲುಂಟೆ? ಉಪಮೆ ನಿಃಸ್ಥಳವಾದ ಬಳಿಕ ಶಬ್ದಸಂದಣಿ ಉಂಟೆ? ಅಖಂಡಿತ ಲಿಂಗಕ್ಕೆ ಅಪ್ರಮಾಣ ಶರಣ, ಸೀಮೆಸಂಬಂಧವೆಂಬ ಸಂಕಲ್ಪ ಉಂಟೆ? ಇದು ಕಾರಣ, ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣಂಗೆ ಭವವಿಲ್ಲ, ಬಂಧನವಿಲ್ಲ.