Index   ವಚನ - 690    Search  
 
ಓಲೆಯನಿಕ್ಕಿದ ಬಾಲೆಯ ಓಲೆಗಳೆಯದಿದೆಂತೊ? ಓಲೆಯಿದ್ದು [ಓಲೆ]ಗಾಯತವಾಯಿತ್ತೆಲ್ಲರಿಗೆಯೂ, ಓಲೆಯೂ ಹೋಯಿತ್ತೆನಗೆ, ಬಾಲೆಯೂ ಹೋಯಿತ್ತೆನಗೆ, ಓಲೆಯ ಬಾಲೆಯ ಕೀಲಬಲ್ಲವರ ಕೂಡಲಚೆನ್ನಸಂಗನೆಂಬೆನು.