Index   ವಚನ - 711    Search  
 
ಲಿಂಗಮುಖವರಿದಂಗೆ ಅಂಗವೆಂಬುದಿಲ್ಲ, ಜಂಗಮಮುಖವರಿದಂಗೆ ಸಂಸಾರವೆಂಬುದಿಲ್ಲ, ಪ್ರಸಾದಮುಖವರಿದಂಗೆ ಇಹಪರವೆಂಬುದಿಲ್ಲ ಈ ತ್ರಿವಿಧವೊಂದೆಂದರಿದಂಗೆ ಮುಂದೇನೂ ಇಲ್ಲ, ಈ ತ್ರಿವಿಧದ ನೆಲೆಯ ಶ್ರುತಿಸ್ಮೃತಿಗಳರಿಯವು, ಕೂಡಲಚೆನ್ನಸಂಗಾ ನಿಮ್ಮ ಶರಣ ಬಲ್ಲ.