Index   ವಚನ - 714    Search  
 
ತನು ಮನ ಧನ ನಿವೇದಿಸಿದಲ್ಲಿ ಭಕ್ತರೆಂಬೆನು, ಅರ್ಥಪ್ರಾಣಾಭಿಮಾನವ ನಿವೇದಿಸಿದಲ್ಲಿ ಪ್ರಸಾದಿಗಳೆಂಬೆನು, ಹೊನ್ನು ಹೆಣ್ಣು ಮಣ್ಣ ನಿವೇದಿಸಿದಲ್ಲಿ ಶರಣರೆಂಬೆನು ನವಸ್ಥಳವನರ್ಪಿಸಿದರೇನಯ್ಯ? ನವಬ್ರಹ್ಮರ ಕುಳ ತಿಳಿಯದನ್ನಕ್ಕ! ನವಬ್ರಹ್ಮರ ಕುಳ ನಷ್ಟವಾದರೆ, ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯರೆಂಬೆನು.