Index   ವಚನ - 716    Search  
 
ಭೂಮಿಯೊಳಗೆ ಬೀಜ ಬಿದ್ದಲ್ಲಿ ಕೆಟ್ಟಿತ್ತೆಂದೆನಬೇಡ, ಮುಂದಣ ಫಲದೊಳಗರಸಿಕೊ! ಕಾಸಿ ಕರಗಿಸಿದ ಬಂಗಾರ ಕೆಟ್ಟಿತ್ತೆಂದೆನಬೇಡ, ಮುಂದಣ ಬಣ್ಣದೊಳಗರಸಿಕೊ! ಹೊತ್ತಿಸಿದ ದೀಪ್ತಿ ಕೆಟ್ಟಿತ್ತೆಂದೆನಬೇಡ, ಮುಂದಣ ಅಗ್ನಿಯೊಳಗರಸಿಕೊ! ಲಿಂಗದೊಳಗೆ ಪ್ರಾಣ, ಪ್ರಾಣದೊಳಗೆ ಲಿಂಗ. ಇದು ಕಾರಣ ಕೂಡಲಚೆನ್ನಸಂಗನ ಶರಣರ ಪಾದಪ್ರತಿಬಿಂಬದೊಳಗರಸಿಕೊ ಸಂಗನಬಸವಣ್ಣನ, ಬಸವಣ್ಣನ.