ದೇವಪ್ರಭೆಯೊಳಗಿಹರಲ್ಲದೆ
ದೇವಗಹನವ ಮಾಡಬಾರದಾರಿಗೆಯೂ.
ದೇವಸಕೀಲದೊಳಗೆ ಬೆಳೆಯಬಹುದಲ್ಲದೆ,
ದೇವನಷ್ಟದೊಳಗೆ ಉತ್ಪತ್ಯವಾಗಬಾರದಾರಿಗೆಯೂ.
ಉತ್ಪತ್ತಿಯ ಗತಿಯನಾರೋಗಣೆಯ
ಮಾಡಬಾರದಾರಿಗೆಯೂ.
ಸಚರಾಚರವೆಲ್ಲವೂ ಈ ಪರಿಯಲ್ಲಿ
ಸಂಭ್ರಮಿಸುತ್ತಿರ್ದುದಲ್ಲಾ,
ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ
ಇದ್ದ ಭಾವವಳಿದಡೆ ಲಿಂಗೈಕ್ಯವು.
Art
Manuscript
Music Courtesy:
Video
TransliterationDēvaprabheyoḷagiharallade
dēvagahanava māḍabāradārigeyū.
Dēvasakīladoḷage beḷeyabahudallade,
dēvanaṣṭadoḷage utpatyavāgabāradārigeyū.
Utpattiya gatiyanārōgaṇeya
māḍabāradārigeyū.
Sacarācaravellavū ī pariyalli
sambhramisuttirdudallā,
idu kāraṇa, kūḍalacennasaṅgayyanalli
idda bhāvavaḷidaḍe liṅgaikyavu.