Index   ವಚನ - 756    Search  
 
ಅರಿವಿನಾಶ್ರಯ ಸಂಗವನರಿತು ನೆರೆ ಕೂಡಲು, ಭಾವದಲ್ಲಿ ಸರ್ಪದಷ್ಟವಾಗಿ ಆಕಾರ ಪ್ರಾಣದಲ್ಲಿಯೇ ವಿಶ್ರಮಿಸಿತ್ತು. ಭಾವದಲ್ಲಿ ಭರಿತ, ನಿರ್ಭಾವದಲ್ಲಿ ನಿರುತ, ಕೂಡಲಚೆನ್ನಸಂಗಯ್ಯ ಸಕಳಾಶ್ರಯಸಂಗ ನಿರ್ಣಯ.