Index   ವಚನ - 763    Search  
 
ಸಮಸುಖ [ಸಮ] ಸಂಧಾನವಿಲ್ಲದ ಸಂಗ ನೋಡಾ! ತಾಗು ನಿರೋಧವಿಲ್ಲದ ಸಂಗ ನೋಡಾ! ಆವಂಗೆ ಆವಂಗೆ ಅನುಭಾವವಿಲ್ಲದ ಸಂಗ ನೋಡಾ! ಕೂಡಲಚೆನ್ನಸಂಗಮದೇವಾ ಲಿಂಗಲೀಯ ಸಂಗ ನೋಡಾ.