Index   ವಚನ - 766    Search  
 
ಅರಿದೆನೆಂಬನ ಅರಿವೆ ನುಂಗಿತ್ತು. ಮರೆದೆನೆಂಬನ ಮರಹೆ ನುಂಗಿತ್ತು. ಇನ್ನೇನಿದ್ದುದಯ್ಯಾ ಅವಧಾನಗೆಟ್ಟು ನಡೆಯದನ್ನಕ್ಕ! ಅರಿವಿನ ಮರಹಿನ ಕುರುಹು ತಾನಲ್ಲ, ಕೂಡಲಚೆನ್ನಸಂಗಾ ಲಿಂಗೈಕ್ಯವು.