ಜಲಮಧ್ಯ ತನುವಳಯದ ಪ್ರಾಣಬದ್ಧನೆ? ಅಲ್ಲ.
ನಿಜಕ್ಕೆ ಪರಿಚಾರಕ, ಸರ ಸುರಸ, ಮೇಘರೂಪ
ಕಂಠ ನಿಜಕಂಠಕ್ಕೆ ಮಂಗಳ ವಸ್ತು.
ಇಂತಿದು ಕಾರಣ ಅಪ್ರತಿಗೆ ಪ್ರತಿ ಹುಟ್ಟಿ
ಇದು ಸಹಿತ ಇದು ಸಾಹಿತ್ಯ ನೋಡಾ,
ಕೂಡಲಚೆನ್ನಸಂಗಾ ಲಿಂಗೈಕ್ಯವು.
Art
Manuscript
Music Courtesy:
Video
TransliterationJalamadhya tanuvaḷayada prāṇabad'dhane? Alla.
Nijakke paricāraka, sara surasa, mēgharūpa
kaṇṭha nijakaṇṭhakke maṅgaḷa vastu.
Intidu kāraṇa apratige prati huṭṭi
idu sahita idu sāhitya nōḍā,
kūḍalacennasaṅgā liṅgaikyavu.