Index   ವಚನ - 772    Search  
 
ಮಂತ್ರಯೋಗ, ಹಠಯೋಗ, ಲಯಯೋಗ, ಜ್ಞಾನಯೋಗ. ಇಂತೀ ಎಲ್ಲ ಯೋಗವನರಿದು ಮರೆದು ಭಕ್ತಿಯೋಗದ ಮೇಲೆ ನಿಂದು, ರಾಜಯೋಗದ ಮೇಲೆ ನುಡಿವುದು ಕಾಣಿರೆ! ರಾಜಯೋಗದ ಮೇಲೆ ನಡೆವುದು ಕಾಣಿರೆ! "ವಾಗತೀತಂ ಮನೋsತೀತಂ ಭಾವತೀತಂ ನಿರಂಜನಮ್| ಸರ್ವಶೂನ್ಯಂ ನಿರಾಕಾರಂ ನಿತ್ಯತ್ವಂ ಪರಮಂ ಪದಮ್"|| ಎಂದುದಾಗಿ, ಶಿವ ಜೀವ ಲಿಂಗ ಪ್ರಾಣ, ಶಿವಯೋಗವೆಂಬುದೆ ಐಕ್ಯ. ಮಹಾಲಿಂಗೈಕ್ಯರ ನಿಲವನು ಅನುಮಾನಿಗಳೆತ್ತ ಬಲ್ಲರು, ಕೂಡಲಚೆನ್ನಸಂಗಮದೇವಾ.