Index   ವಚನ - 774    Search  
 
ಸ್ಥಲದಿಂದ ನಡೆನುಡಿಯಾಯಿತ್ತು, ನಿಃಸ್ಥಲದಿಂದ ನುಡಿನಡೆಗೆಟ್ಟಿತ್ತು. ನೋಡಲೊಡನೆ ಸ್ಥಲವಾಗಿ ತೋರಿತ್ತು, ಆರಯ್ಯಲೊಡನೆ ನಿಃಸ್ಥಲವಾಗಿ ತೋರಿತ್ತು. ಸ್ಥಲವೂ ಅಲ್ಲ, ನಿಃಸ್ಥಲವೂ ಅಲ್ಲ, ನೋಟವೆ ಕೂಟ, ಕೂಡಲಚೆನ್ನಸಂಗಾ.