ಕುಲವಿಲ್ಲದ ಅಕುಲನು,
ಶರೀರವಿಲ್ಲದ ಸಂಬಂಧಿ,
ಕೋಪವಿಲ್ಲದ ಶಾಂತನು,
ಮತ್ಸರವಿಲ್ಲದ ಮಹಿಮನು.
ಕರ್ಮವಿಲ್ಲದ ಕಾರಣಿಕನು,
ಅರ್ಪಿತವಿಲ್ಲದ ಆಪ್ಯಾಯನಿ,
ಜಂಗಮವಿಲ್ಲದ ಸಮಶೀಲನು,
ಲಿಂಗವಿಲ್ಲದ ನಿರುತನು.
ಪ್ರಸಾದವಿಲ್ಲದ ಪರಿಣಾಮಿ,
ಕೂಡಲಚೆನ್ನಸಂಗಾ ನಿಮ್ಮ ಶರಣನು.
Art
Manuscript
Music
Courtesy:
Transliteration
Kulavillada akulanu,
śarīravillada sambandhi,
kōpavillada śāntanu,
matsaravillada mahimanu.
Karmavillada kāraṇikanu,
arpitavillada āpyāyani,
jaṅgamavillada samaśīlanu,
liṅgavillada nirutanu.
Prasādavillada pariṇāmi,
kūḍalacennasaṅgā nim'ma śaraṇanu.