Index   ವಚನ - 787    Search  
 
ಅನ್ಯಲಿಂಗ ಅನ್ಯಲಿಂಗವೆಂದೆಂಬಿರಿ, ಅನ್ಯಲಿಂಗವದಾವುದು? ತನ್ನಲಿಂಗವದಾವುದು? ಅಂಗದ ಮೇಲೆ ಲಿಂಗವುಳ್ಳವರ ಮನೆಯ ಹೊಗಿಸಲಾಗದು, ಬರುಕಾಯರಿಗೆ ನೀಡಲಾಗದು. ಗುರು ಲಿಂಗ ಜಂಗಮ ಪ್ರಸಾದವಿಲ್ಲದವರ ಕಂಡರೆ ಮಾಡುವಾತ ಭಕ್ತನಲ್ಲ, ಕೂಡಲಚೆನ್ನಸಂಗಮದೇವಾ.