Index   ವಚನ - 802    Search  
 
ನರರಿಗೆಯ್ದೆ ಗುರುವಪ್ಪ ಹಿರಿಯರು, ನೀವು ಕೇಳಿರೆ! ನಿಮ್ಮ ಗುರುತನ ಕೆಟ್ಟು ಶಿಷ್ಯನ ಶಿಷ್ಯತನವ ಕೆಡಿಸಬಲ್ಲರೆ, ಅವರ ಹಿರಿಯರೆಂಬೆ, ಕೂಡಲಚೆನ್ನಸಂಗಮದೇವಾ.