Index   ವಚನ - 849    Search  
 
ಲಿಂಗದ ರಚನೆಯ ಮಾಡುವರೆ ಇಲ್ಲಿಯ ರಚನೆ ಕೆಡಬೇಕು. ರಚನೆ ರಂಜಕ ಭುಂಜಕ ಹೊಂದಿದ ಸಂಗಸೂತಕವಿಲ್ಲ, ಲಿಂಗವಿಯೋಗವಿಲ್ಲ, ಅಂಗದ ನಿಲವ ಸಂಗಕ್ಕೆ ತರಲುಂಟೆ? ಆನಂದದಿಂದ ವಿಚಾರಿಸಿ ನೋಡಲು ಸಂಗ ನಿಸ್ಸಂಗ ನೋಡಾ! ಕೂಡಲಚೆನ್ನಸಂಗನೆಂಬ ನಿಶ್ಚಿಂತ ನಿರಾಳವು.