Index   ವಚನ - 852    Search  
 
"ಮನಸ್ಥಂ ಮನಮಧ್ಯಸ್ಥಂ ಮನಸಾ ಮನವರ್ಜಿತಂ| ಮನಸಾ ಮನ ಆಲೋಕ್ಯ ಸ್ವಯಂ ಸಿದ್ಧಾಂತಯೋಗಿನಃ"|| ಅರಿದೆನೆಂಬ ಅರಿವು ಅರಿವನೆ ನುಂಗಿತ್ತು, ಮರೆದೆನೆಂಬ ಮರಹು ಮರಹನೆ ನುಂಗಿತ್ತು. ನೆನಹೆ ಅವಧಾನಗೆಟ್ಟಿತ್ತು, ಕೂಡಲಚೆನ್ನಸಂಗನೆಂಬ ಲಿಂಗ ಅವಧಾನವಿಲ್ಲಾಗಿ.