Index   ವಚನ - 854    Search  
 
ಸ್ಥಲವಿಡಿದು ಸರ್ವದಲಾಯತನಾಗಿ ಸಹಜವಳವಟ್ಟಲ್ಲಿ ಇದದೆನ್ನಲುಂಟೆ? ಭಾವವಳಿದು ನಿರ್ಭಾವವುಳಿದಲ್ಲಿ ಇದದೆನ್ನಲುಂಟೆ? ಕದಂಬ ಕಾಳಾಸ ಕೂಡಲಚೆನ್ನಸಂಗಯ್ಯ ಸರ್ವಾಂಗಮಯವಾದಲ್ಲಿ.