Index   ವಚನ - 856    Search  
 
"ಅತೀತಃ ಪಂಥಾನಂ ತವ ಚ ಮಹಿಮಾ" ಎಂಬ ಶ್ರುತಿಗಳು ನಿಮ್ಮ ಕಾಣಲರಿಯವು ದೇವಾ. ಲಿಂಗದೇವಾ, ನಿಮ್ಮ ಮಹಿಮೆಯ ಸ್ತುತಿಯಿಸಿ ಕಾಣಲರಿಯವು ದೇವಾ. "ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ | ಆನಂದಂ ಬ್ರಹ್ಮಣೋ ವಿದ್ವಾನ್ ನ ಬಿಭೇತಿ ಕುತಶ್ಚನ"|| ಎಂಬ ತುದಿ ಪದವು, ಕೂಡಲಚೆನ್ನಸಂಗಮದೇವಾ ಪರವಿಲ್ಲಾಗಿ.