Index   ವಚನ - 858    Search  
 
ಏನೆಂಬೆನೇನೆಂಬೆ ಆಶ್ರಯವಿರಹಿತವ, ಏನೆಂಬೆನೇನೆಂಬೆ ನಾಮ ನಿರ್ನಾಮವ, ಏನೆಂಬೆನೇನೆಂಬೆ ಸಾರಾಯ ಸನುಮತವಲ್ಲದುದ, ಏನೆಂಬೆನೇನೆಂಬೆ ದೇವಾ ಕ್ರೀಯ ಮೀರಿದ ಸಂಬಂಧವ, ಕೂಡಲಚೆನ್ನಸಂಗಮದೇವಾ. ಆನೆಂಬುದಿಲ್ಲದುದನೇನೆಂದುಪಮಿಸುವೆ.