Index   ವಚನ - 870    Search  
 
ಅಂಗದ ಪಾದತೀರ್ಥವ ಲಿಂಗದ ಮಜ್ಜನಕ್ಕೆರೆವುದು, ಲಿಂಗದ ಪಾದತೀರ್ಥವ ಪಂಚಪಾದಾರ್ಚನೆಯ ಮಾಡುವದು ಮಾಡಿದ ಪ್ರಾಣಂಗೆ ಪರಿಣಾಮವನೈದಿಸುವದು. ಇಂತೀ ತ್ರಿವಿಧ ಉದಕದ ಭೇದವನರಿಯದೆ, ಅವನೊಬ್ಬ ಮಜ್ಜನಕ್ಕೆರೆದಡೆ ಭವಿಚಾಂಡಾಲರ ಮೂತ್ರದಲ್ಲಿ ಎರೆದಂತೆ ಕಾಣಾ ಕೂಡಲಚೆನ್ನಸಂಗಮದೇವಯ್ಯಾ.