Index   ವಚನ - 922    Search  
 
ಅಡಿಗಡಿಗೆ ಸ್ಥೂಲ ಸೂಕ್ಷ್ಮವೆಂಬ ಶಬ್ದಪರಿಭಾವ ತಲೆದೋರದೆ, ಸಂಗ ಮಹಾಸಂಗದ ವರ್ಮದಾಸೋಹ ಹೃದಯಕ್ಕೆ ಸಾಹಿತ್ಯವಾದ ಭಕ್ತಂಗೆ ಅರ್ಪಿತ ಅನರ್ಪಿತವೆಂಬ ಸಂಕಲ್ಪ ವಿಕಲ್ಪರಹಿತ, ಮತ್ತೆ ಅರ್ಪಿಸಬಲ್ಲನಾಗಿ. ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ ಈಶಾನ್ಯವೆಂಬ ಪಂಚವಕ್ತ್ರವನು ಊರ್ಧ್ವಮುಖಕ್ಕೆ ತಂದು, ಅರ್ಪಿಸಬಲ್ಲನಾಗಿ ಗುರುಪ್ರಸಾದಿ. ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ಚಂದ್ರ, ಸೂರ್ಯ, ಆತ್ಮ ಇಂತೀ ಅಷ್ಟತನುವನು ದಾಸೋಹದಲ್ಲಿ ಅರ್ಪಿಸಬಲ್ಲನಾಗಿ ಜಂಗಮಪ್ರಸಾದಿ. ಹೊರಗೆ ಭಜಿಸಲಿಲ್ಲ, ಒಳಗೆ ನೆನೆಯಲಿಲ್ಲ. ಸರ್ವಾಂಗಲಿಂಗಿಯಾಗಿಹ ಲಿಂಗಪ್ರಸಾದಿ. ಇದು ಕಾರಣ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣ ಮಹಾಪ್ರಸಾದಿ.