Index   ವಚನ - 933    Search  
 
ಅನ್ನ ವಿಕಾರವಳಿದು ಸತಿಸಂಗವರಿಯ ನೋಡಾ. ದೇಹ ಗುಣಂಗಳಳಿದು ನಿರ್ದೇಹಪ್ರಸಾದಿ ನೋಡಯ್ಯಾ. ಅಶನ ವ್ಯಸನಾದಿಗಳು ಇರಲಂಜಿ ಹೋದವು ನೋಡಾ! ಇವೆಲ್ಲ ಗುಣಂಗಳಳಿದು ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನೊಬ್ಬನೆ ಸಾವಧಾನಪ್ರಸಾದಿ ನೋಡಾ.