ಅನಾಹತಮಹೇಶ್ವರನೆಂಬಾತಂಗೆ
ಪ್ರಸಾದಸ್ಥಲದ ಪ್ರಸಾದಾಶ್ರಯದ ಭವಿತ್ವದ ನೀಕರಿಸಿ,
ಪ್ರಸಾದವನು ನೆಲೆಗೊಳಿಸಿ,
ಅನ್ಯಥಾ ಪವನ ಆಧಾರ ಆಶ್ರಯವ ನೀಕರಿಸಿ,
ದ್ವಿಜ ಪ್ರಜ ತ್ರಜವೆಂಬ ಡಿಂಬ
ಮರ್ತ್ಯಕ್ಕೆ ಕಳುಹಿದಿರಿ ಬಸವಣ್ಣನನು.
ಮಡಿ ಮಡಿವಾಳನನು ಒಡನೆ ಕಳುಹಿದಿರಿ.
ಕನ್ನಡಿಯಾಗಿ ಭವಕ್ಕೆ ಬಾರದಂತೆ ಭಾವವ ನಿಲಿಸಿದಿರಿ.
ಬಳಿಕ ಲಿಂಗಸ್ಥಲ, ಜಂಗಮಸ್ಥಲ,
ಪ್ರಸಾದಸ್ಥಲ ನಿರ್ಧರವಾದವು.
ಚಿರಕಾಲದಲ್ಲಿ ಮಹಾಸುನಾದಗಣ,
ಅನಾಹತನಾದಗಣ ಸಂಪೂರ್ಣನಾಗಿಪ್ಪನಯ್ಯಾ
ಕೂಡಲಚೆನ್ನಸಂಗಾ, ನಿಮ್ಮ ಶರಣ ಬಸವಣ್ಣನು.
Art
Manuscript
Music
Courtesy:
Transliteration
Anāhatamahēśvaranembātaṅge
prasādasthalada prasādāśrayada bhavitvada nīkarisi,
prasādavanu nelegoḷisi,
an'yathā pavana ādhāra āśrayava nīkarisi,
dvija praja trajavemba ḍimba
martyakke kaḷuhidiri basavaṇṇananu.
Maḍi maḍivāḷananu oḍane kaḷuhidiri.
Kannaḍiyāgi bhavakke bāradante bhāvava nilisidiri.
Baḷika liṅgasthala, jaṅgamasthala,
prasādasthala nirdharavādavu.
Cirakāladalli mahāsunādagaṇa,
anāhatanādagaṇa sampūrṇanāgippanayyā
kūḍalacennasaṅgā, nim'ma śaraṇa basavaṇṇanu.