Index   ವಚನ - 945    Search  
 
ಅಯ್ಯಾ, ಆಯತ ಲಿಂಗದಲ್ಲಿ ಆಗಾಗಿ ಆಚಾರಲಿಂಗ ಪ್ರಾಣಿಯಾದ, ಆಚಾರಲಿಂಗದಲ್ಲಿ ಅವಧಾನಿಯಾಗಿ ಸರ್ವಾಚಾರಸಂಪನ್ನನಾದ, ಸರ್ವಾಚಾರಸಂಪತ್ತಿನಲ್ಲಿ ಲಿಂಗೈಕ್ಯವಾಗಿಪ್ಪನು. ಕೂಡಲಚೆನ್ನಸಂಗನಲ್ಲಿ ಸಂಗನಬಸವಣ್ಣನು ಆಚಾರವ ಬಲ್ಲನಲ್ಲದೆ ನಾನೆತ್ತ ಬಲ್ಲೆನಯ್ಯಾ ಪ್ರಭುವೆ.