Index   ವಚನ - 947    Search  
 
ಅಯ್ಯಾ, ಕರ್ಮದಾಗರವ ಹೊಕ್ಕು, ವಿಷಯದ ಬಲೆಯಲ್ಲಿ ಸಿಲುಕಿ, ದೇಹಮೋಹವೆಂಬ ಮಹಾದುಃಖಕ್ಕೀಡಾಗಿ ಸಾವುತ್ತಿದ್ದೇನೆ, ಬೇವುತ್ತಿದ್ದೇನೆ. ಅಯ್ಯಾ ತಪ್ಪೆನ್ನದು ತಪ್ಪೆನ್ನದು. ಈ ಮೊರೆಯ ವಿಚಾರಿಸಿ ಕಾರುಣ್ಯವ ಮಾಡು, ಕಾರುಣ್ಯವ ಮಾಡು. ಅಯ್ಯಾ ಆಳಿನಪಮಾನ ಆಳ್ದಂಗೆಂಬಂತೆ, ಎನ್ನಳಲು ನಿಮಗೆ ತಪ್ಪದು. ಕಾರುಣ್ಯವ ಮಾಡು, ಅಯ್ಯಾ ಕಾರುಣ್ಯವ ಮಾಡು, ಕೂಡಲಚೆನ್ನಸಂಗಮದೇವಾ.