ಅಯ್ಯಾ ಪಾದಪೂಜೆಯೆಂಬುದು
ಅಗಮ್ಯ ಅಗೋಚರ ಅಪ್ರಮಾಣ ಅಸಾಧ್ಯ.
ಶ್ರೀಗುರು ಬಸವೇಶ್ವರದೇವರು
ತಮ್ಮ ಅಂತರಂಗದೊಳಗಣ
ಪಾದಪೂಜೆಯಿಂದಾದ ತೀರ್ಥಪ್ರಸಾದವು
`ಗಣಸಮೂಹಕ್ಕೆ ಸಲ್ಲಲಿ' ಎಂದು ನಿರ್ಮಿಸಿ,
ಭಕ್ತಿಯ ತೊಟ್ಟು ಮೆರೆದರು.
ಇಂತಪ್ಪ ತೀರ್ಥಪ್ರಸಾದವ ಸೇವಿಸುವ ಕ್ರಮವೆಂತೆಂದಡೆ;
“ಗ್ರಾಮಸೇವಾದಿಸಂರಂಭನೃತ್ಯಗೀತಾದಿ ವರ್ಜಿತಃ|
ಅನಾಚಾರ ವಿಹೀನೋ ಯೋ ತಸ್ಯ ತೀರ್ಥಂ ಪಿಬೇತ್ ಸದಾ”||
ಇಂತೆಂದುದಾಗಿ,
ತಂಬೂರಿ ಕಿನ್ನರಿವಿಡಿದು ಮನೆಮನೆಯ ಬೇಡುವಾತ,
ಹಲವು ವೇಷವ ತೊಟ್ಟು ಆಡುವಾತ,
ನಗಾರಿ ಸಮ್ಮೇಳ ಕರಣೆ ಕಹಳೆ ಶಂಖ ಬಾರಿಸುವಾತ,
ಅಷ್ಟಾವರಣ ಪಂಚಾಚಾರದಲ್ಲಿ ಅಹಂಕರಿಸುವಾತ ಅನಾಚಾರಿ.
ಪರ್ವತದ ಕಂಬಿ ಮಹಾಧ್ವಜವ ಹೊರುವಾತ
ರಾಜಾರ್ಥದಲ್ಲಿ ಅಹುದ ಅಲ್ಲವ ಮಾಡಿ,
ಅಲ್ಲವ ಅಹುದ ಮಾಡುವಾತ
ಅನಾಚಾರವ ಹೇಳುವಾತ ಸದಾಚಾರದಲ್ಲಿ ತಪ್ಪುವಾತ
ಭಕ್ತಗಣಂಗಳ ನಿಂದೆಯ ಮಾಡುವಾತ
ಸದಾಚಾರಸದ್ಭಕ್ತಗಣಂಗಳ ಕಂಡಡೆ ಗರ್ವಿಸುವಾತ
ಧಾನ್ಯ ಅರಿವೆ ಬೆಳ್ಳಿ ಬಂಗಾರಂಗಳ
ಕ್ರಯವಿಕ್ರಯದಲ್ಲಿ ವಂಚಿಸುವಾತ
ಗುರುಹಿರಿಯರಲ್ಲಿ ಹಾಸ್ಯರಹಸ್ಯವ ಮಾಡುವಾತ
ಪರದೈವ ಪರಧನ ಪರಸ್ತ್ರೀ ಗಮಿಸುವಾತ
ಸೂಳೆ ಬಸವಿಯರ ಗೃಹದಲ್ಲಿ ಇರುವಾತ
ಆಚಾರಭ್ರಷ್ಟ ಮಾನಹೀನರ ಸಂಗವ ಮಾಡುವಾತ,
ದುರುಳು ಮಂಕು.
ಅವರ ಗುರುಲಿಂಗಜಂಗಮವೆಂದು ನುಡಿಯಲಾಗದು.
ಅದೆಂತೆಂದಡೆ:
“ಖೇಟಕೋ ದಂಡಚಕ್ರಾಸಿಗದಾತೋಮರಧಾರಿಣಃ|
ಜಂಗಮಾ ನಾನುಮಂತವ್ಯಾಃ ಸ್ವೀಯಲಕ್ಷಣಸಂಯುತಾಃ||
ಆಶಾತೋ ವೇಷಧಾರೀ ಚ ವೇಷಸ್ಯ ಗ್ರಾಸತೋಷಕಃ|
ಗ್ರಾಸಶ್ಚ ದೋಷವಾಹೀ ಚ ಇತಿ ಭೇದೋ ವರಾನನೇ||
ಅನಾಚಾರವಿಭಾವೇನ ಸದಾಚಾರಂ ನ ವರ್ಜಯೇತ್|
ಸದಾಚಾರೀ ಸುಭಕ್ತಾನಾಂ ಪಾದತೀರ್ಥಪ್ರಸಾದಕಃ||
ಮಹಾಭೋಗಿ ಮಹಾತ್ಯಾಗೀ[ರೋಗಿ?]
ಲೋಲುಪೋ ವಿಷಯಾತುರಃ|
ಯಸ್ತ್ವಂಗವಿಹೀನಃ ಸ್ಯಾತ್ತಸ್ಯ [ಪಾದ]
ತೀರ್ಥಂ[ ನ]ಸೇವಯೇತ್||
ಕುಷ್ಠೀ ಕರಣಹೀನಶ್ಚ ಬಧಿರಃ ಕಲಹಪ್ರಿಯಃ|
ವ್ಯಾಧಿಭಿಸ್ತ್ವಂಗಹೀನೈಶ್ಚತೈರ್ನ ವಾಸಂ ಚ ಕಾರಯೇತ್”||
ಇಂತೀ ದುರ್ಮಾರ್ಗ ನಡತೆಗಳಿಲ್ಲದೆ,
ಅಯೋಗ್ಯವಾದ ಜಂಗಮವನುಳಿದು,
ಯೋಗ್ಯಜಂಗಮವ ವಿಚಾರಿಸಿ
ತನು ಮನ ಧನ ವಂಚನೆಯಿಲ್ಲದೆ ಸಮರ್ಪಿಸಿ
ಅವರ ತೀರ್ಥಪ್ರಸಾದವ ಕೈಕೊಳ್ಳಬೇಕಲ್ಲದೆ
ದುರ್ಮಾರ್ಗದಲ್ಲಿ ಆಚರಿಸುವಾತನಲ್ಲಿ ತ್ರಿಣೇತ್ರವಿದ್ದಡೆಯೂ
ತೀರ್ಥಪ್ರಸಾದ ಉಪದೇಶವ ಕೊಳಲಾಗದು ಕಾಣಾ.
ಕೂಡಲಚೆನ್ನಸಂಗಮದೇವ ಸಾಕ್ಷಿಯಾಗಿ
ಗುರುವಚನವ ತಿಳಿದು ನೋಡಾ ಸಂಗನಬಸವಣ್ಣಾ.
Art
Manuscript
Music
Courtesy:
Transliteration
Ayyā pādapūjeyembudu
agamya agōcara apramāṇa asādhya.
Śrīguru basavēśvaradēvaru
tam'ma antaraṅgadoḷagaṇa
pādapūjeyindāda tīrthaprasādavu
`gaṇasamūhakke sallali' endu nirmisi,
bhaktiya toṭṭu meredaru.
Intappa tīrthaprasādava sēvisuva kramaventendaḍe;
“grāmasēvādisanrambhanr̥tyagītādi varjitaḥ|
anācāra vihīnō yō tasya tīrthaṁ pibēt sadā”||
intendudāgi,
tambūri kinnariviḍidu manemaneya bēḍuvāta,
halavu vēṣava toṭṭu āḍuvāta,
nagāri sam'mēḷa karaṇe kahaḷe śaṅkha bārisuvāta,
aṣṭāvaraṇa pan̄cācāradalli ahaṅkarisuvāta anācāri.
Parvatada kambi mahādhvajava horuvāta
rājārthadalli ahuda allava māḍi,
allava ahuda māḍuvāta
anācārava hēḷuvāta sadācāradalli tappuvāta
bhaktagaṇaṅgaḷa nindeya māḍuvāta
sadācārasadbhaktagaṇaṅgaḷa kaṇḍaḍe garvisuvāta
dhān'ya arive beḷḷi baṅgāraṅgaḷa
krayavikrayadalli van̄cisuvāta
guruhiriyaralli hāsyarahasyava māḍuvāta
paradaiva paradhana parastrī gamisuvāta
sūḷe basaviyara gr̥hadalli iruvāta
ācārabhraṣṭa mānahīnara saṅgava māḍuvāta,
duruḷu maṅku.
Avara guruliṅgajaṅgamavendu nuḍiyalāgadu.
Adentendaḍe:
“Khēṭakō daṇḍacakrāsigadātōmaradhāriṇaḥ|
jaṅgamā nānumantavyāḥ svīyalakṣaṇasanyutāḥ||
āśātō vēṣadhārī ca vēṣasya grāsatōṣakaḥ|
grāsaśca dōṣavāhī ca iti bhēdō varānanē||
anācāravibhāvēna sadācāraṁ na varjayēt|
sadācārī subhaktānāṁ pādatīrthaprasādakaḥ||
mahābhōgi mahātyāgī[rōgi?]
Lōlupō viṣayāturaḥ|
yastvaṅgavihīnaḥ syāttasya [pāda]
tīrthaṁ[na]sēvayēt||
kuṣṭhī karaṇahīnaśca badhiraḥ kalahapriyaḥ|
vyādhibhistvaṅgahīnaiścatairna vāsaṁ ca kārayēt”||
Intī durmārga naḍategaḷillade,
ayōgyavāda jaṅgamavanuḷidu,
yōgyajaṅgamava vicārisi
tanu mana dhana van̄caneyillade samarpisi
avara tīrthaprasādava kaikoḷḷabēkallade
durmārgadalli ācarisuvātanalli triṇētraviddaḍeyū
tīrthaprasāda upadēśava koḷalāgadu kāṇā.
Kūḍalacennasaṅgamadēva sākṣiyāgi
guruvacanava tiḷidu nōḍā saṅganabasavaṇṇā.