ಅಯ್ಯಾ, ಶ್ರೀವಿಭೂತಿಯ
ಸತ್ಕ್ರಿಯೆಯಿಂದ [ಮಾಡಿ]
ಧರಿಸುವ ಭೇದವೆಂತೆಂದಡೆ:
ಆವ ವರ್ಣದ ಗೋವಾದಡೆಯೂ ಸರಿಯೆ,
ಅವಯವಂಗಳು ನೂನು-ಕೂನಿಲ್ಲದೆ,
ಬರೆಗಳ ಹಾಕದೆ ಇರುವಂತಹ ಗೋವ ತಂದು,
ಅದಕ್ಕೆ ಧೂಳಪಾದೋದಕ ಸ್ನಾನವ ಮಾಡುವಂತಹದೆ
ಕ್ರಿಯಾಲಿಂಗಧಾರಣದೀಕ್ಷೆ,
ಧೂಳಪಾದೋದಕಸೇವನೆಯೆ ಮಹಾತೀರ್ಥ.
ಭಕ್ತ ಆತನ ಭಾಂಡದಲ್ಲಿರುವ ಪದಾರ್ಥವ
ಹಸ್ತ ಮುಟ್ಟಿ ಹಾಕಿದ ಮೇಲೆ ಮಹಾಪ್ರಸಾದವಾಯಿತ್ತು.
ಇಂತಹ ಆಚಾರಯುಕ್ತವಾದ ಗೋವಿನ ಸಗಣಿಯ
ಸ್ವಚ್ಛವಾದ ಸ್ಥಳದಲ್ಲಿ ಚೂರ್ಣ ಮಾಡಿ ಒಣಗಿಸಿ
ಕ್ರಿಯಾಗ್ನಿಯಿಂದ ದಹಿಸಿದ ಬೂದಿಯ
ಧೂಳಪಾದೋದಕದಲ್ಲಿ ಶೋಧಿಸಿ,
ಅದರೊಳಗೆ ತಿಳಿಯ ತೆಗೆದು ಘಟ್ಟಿಯ ಮಾಡಿ
ಪೂರ್ವದಲ್ಲಿ [ಗುರು] ಹೇಳಿದ ವಚನೋಕ್ತಿಯಿಂದ
ಧರಿಸಿದ ಲಿಂಗಾಧಾರಕಭಕ್ತಂಗೆ
ಗುರುದೀಕ್ಷೆಯುಂಟಾಗುವುದಯ್ಯಾ,
ಉಪಾಧಿಭಕ್ತಂಗೆ ಗುರುಲಿಂಗಜಂಗಮದ
ಸದ್ಭಕ್ತಿ ದೊರೆವುದಯ್ಯಾ,
ನಿರುಪಾಧಿಭಕ್ತಂಗೆ ತ್ರಿವಿಧ ಪಾದೋದಕ
ಪ್ರಸಾದ ದೊರೆಯುವುದಯ್ಯಾ,
ಸಹಜ ಭಕ್ತಂಗೆ ಸಚ್ಚಿದಾನಂದಪದ
ದೊರೆಯುವುದಯ್ಯಾ,
ನಿರ್ವಂಚಕಭಕ್ತಂಗೆ ನಿರ್ವಾಣ ಪದವಾಗುವುದಯ್ಯಾ,
ನಿರ್ವಾಣಭಕ್ತಂಗೆ ನಿಷ್ಕಳಂಕ
ಜ್ಯೋತಿರ್ಮಯ ಪರಶಿವಲಿಂಗದಲ್ಲಿ
ಕೂಟಸ್ಥವಾಗಿ, ನಿರಂಜನಜಂಗಮದಲ್ಲಿ ಕೂಡಿ
ಹರಗಣಸಹವಾಗಿ ನಿರವಯಸಮಾಧಿ
ತಪ್ಪದು ನೋಡಾ
ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Ayyā, śrīvibhūtiya
satkriyeyinda [māḍi]
dharisuva bhēdaventendaḍe:
Āva varṇada gōvādaḍeyū sariye,
avayavaṅgaḷu nūnu-kūnillade,
baregaḷa hākade iruvantaha gōva tandu,
adakke dhūḷapādōdaka snānava māḍuvantahade
kriyāliṅgadhāraṇadīkṣe,
dhūḷapādōdakasēvaneye mahātīrtha.
Bhakta ātana bhāṇḍadalliruva padārthava
hasta muṭṭi hākida mēle mahāprasādavāyittu.
Intaha ācārayuktavāda gōvina sagaṇiya
svacchavāda sthaḷadalli cūrṇa māḍi oṇagisi
kriyāgniyinda dahisida būdiya
Dhūḷapādōdakadalli śōdhisi,
adaroḷage tiḷiya tegedu ghaṭṭiya māḍi
pūrvadalli [guru] hēḷida vacanōktiyinda
dharisida liṅgādhārakabhaktaṅge
gurudīkṣeyuṇṭāguvudayyā,
upādhibhaktaṅge guruliṅgajaṅgamada
sadbhakti dorevudayyā,
nirupādhibhaktaṅge trividha pādōdaka
prasāda doreyuvudayyā,
sahaja bhaktaṅge saccidānandapada
doreyuvudayyā,
nirvan̄cakabhaktaṅge nirvāṇa padavāguvudayyā,
nirvāṇabhaktaṅge niṣkaḷaṅka
jyōtirmaya paraśivaliṅgadalli
kūṭasthavāgi, niran̄janajaṅgamadalli kūḍi
haragaṇasahavāgi niravayasamādhi
tappadu nōḍā
kūḍalacennasaṅgamadēvā.