ಅರಸಿನ ಭಕ್ತಿ ಅಹಂಕಾರದಲ್ಲಿ ಹೋಯಿತ್ತು,
ಓಲೆಕಾರನ ಭಕ್ತಿ ಅಲಗಿನ ಮನೆಯಲ್ಲಿ ಹೋಯಿತ್ತು,
ಬಣಜಿಗನ ಭಕ್ತಿ ಬಳ್ಳದ ಮನೆಯಲ್ಲಿ ಹೋಯಿತ್ತು,
ಅಕ್ಕಸಾಲೆಯ ಭಕ್ತಿ ಅಗ್ಗಿಷ್ಟಿಗೆಯಲ್ಲಿ ಹೋಯಿತ್ತು,
ಶೀಲವಂತನ ಭಕ್ತಿ ಶಂಕೆಯಲ್ಲಿ ಹೋಯಿತ್ತು,
ಮಾಟ ಕೊಟದವನ ಭಕ್ತಿ ಅಂಜಿಕೆಯಲ್ಲಿ ಹೋಯಿತ್ತು,
ವ್ರತಸ್ತನ ಭಕ್ತಿ ಪ್ರಪಂಚಿನಲ್ಲಿ ಹೋಯಿತ್ತು.
ಇದು ಕಾರಣ, ಕೂಡಲಚೆನ್ನಸಂಗಯ್ಯಾ
ಕಿರಾತರು ಹುಟ್ಟಿ ಪುರಾತರು ಅಡಗಿದರು.