Index   ವಚನ - 972    Search  
 
ಅರಿವು ಮುಂತಾಗಿ ಕೊಂಬುದು ಪ್ರಸಾದವಲ್ಲ, ಲಿಂಗ ಮುಂತಾಗಿ ಕೊಂಬುದು ಪ್ರಸಾದವಲ್ಲ, ಜಂಗಮ ಮುಂತಾಗಿ ಕೊಂಬುದು ಪ್ರಸಾದವಲ್ಲ, ಸಯಜ್ಞಾನವಳಿದರೂ ಪ್ರಸಾದವಲ್ಲ, ಇವು ಏನೂ ಪ್ರಸಾದವಲ್ಲ, ಸಹಜಪ್ರಸಾದವೆ ಬೇಕು. ಅಂತಪ್ಪ ಪ್ರಸಾದಿಯ ತೋರಿ ಬದುಕಿಸಯ್ಯಾ, ಕೂಡಲಚೆನ್ನಸಂಗಮದೇವಾ.