Index   ವಚನ - 980    Search  
 
ಅಷ್ಟದಳಕಮಲದ ಮೇಲಣ ನಿಃಶೂನ್ಯದ ವರ್ಮವನರಿಯದ ಅಂಧಕರೆಲ್ಲ ಪ್ರಾಣಲಿಂಗ ಪ್ರಾಣಲಿಂಗವೆಂಬ ವ್ಯವಹಾರ, ಸಂತೆಯ ಪಸರ! ಅಂಗದ ಆಪ್ಯಾಯನಕ್ಕೆ ಲಿಂಗವ ಹುಡುಕಿ ನೋಡುವ ಭಂಗಿತರ ನೋಡಾ ಕೂಡಲಚೆನ್ನಸಂಗಮದೇವಾ.