Index   ವಚನ - 982    Search  
 
ಅಷ್ಟವಿಧಾರ್ಚನೆ ಷೋಡಶೋಪಚಾರವಲ್ಲದೆ ಮುಟ್ಟಲರಿಯದವರ ಕಂಡಡೆ ಆನವರನೇನೆಂಬೆನಯ್ಯಾ? ಆವ ಭಾವದಲ್ಲಿ, ಆವ ಮುಖದಲ್ಲಿ, ಆವ ಜ್ಞಾನದಲ್ಲಿ, ಅವರನು `ಅಯ್ಯಾ' ಎಂಬೆನು? ನಿಮ್ಮಲ್ಲಿ ಸಮ್ಯಗೈಕ್ಯವಾದ ಸತ್ಯಶರಣನ `ಅಯ್ಯಾ' ಎಂಬೆನು ಕೂಡಲಚೆನ್ನಸಂಗಯ್ಯಾ.