Index   ವಚನ - 987    Search  
 
ಆಕಾರವೇ ಭಕ್ತ, ನಿರಾಕಾರವೇ ಮಹೇಶ್ವರ, ಸಹಕಾರವೇ ಪ್ರಸಾದಿ, ಸನ್ಮತ ಈಗಲೇ ಪ್ರಾಣಲಿಂಗಿ, ಲೋಕವಿರಹಿತನೇ ಶರಣ, ಈ ಭ್ರಾಂತುವಿನ ಬಲೆಯೊಳಗೆ ಸಿಲುಕದಾತನೇ ಐಕ್ಯ. ಅದು ಎಂತು ಎಂದರೆ: ಪೃಥ್ವಿ ಈಗಲೇ ಭಕ್ತ, ಅಪ್ಪು ಈಗಲೇ ಮಹೇಶ್ವರ, ಅಗ್ನಿ ಈಗಲೇ ಪ್ರಸಾದಿ, ವಾಯು ಈಗಲೇ ಪ್ರಾಣಲಿಂಗಿ, ಆಕಾಶ ಈಗಲೇ ಶರಣ, ಈ ಪಂಚತತ್ತ್ವದ ಒಳಗೆ ಬೆಳಕು ಕತ್ತಲೆ ಐಕ್ಯವು. ಇದು ಕಾರಣ, ಕೂಡಲಚೆನ್ನಸಂಗಮದೇವಯ್ಯಾ ನಿಮ್ಮ ಶರಣ ಪಂಚತತ್ತ್ವದ ಒಳಗೆ ಪಂಚತತ್ತ್ವ ಎಂಬ ಅಣ್ಣಗಳಿರಾ ನೀವು ಕೇಳಿರೊ.