ಆಧಾರ, ಲಿಂಗ, ನಾಭಿ ಮಧ್ಯ, ನಾಳ,
ಕಂದದ, ಬಯಲೊಳಗಿರ್ಪ
ಸೂಕ್ಷ್ಮಾಗ್ನಿಯನು ವ್ಯಾವೃತ್ತಿಯಿಂದೂರ್ಧ್ವಮುಖಕ್ಕೆ ತಂದು
ಧ್ರುವಮಂಡಲದ ಮೇಲೆ ನಿಲಿಸಿ,
ಪ್ರಭಾಮಂಡಲದೊಳಗೆ ಹೊಳೆವ ಪ್ರಾಣಲಿಂಗಕ್ಕೆ
ನಮಚಕ್ರಮಧ್ಯದಲ್ಲಿರ್ಪ ಅಮೃತವನು,
ಅರ್ಪಿತವ ಮಾಡಿ ಪ್ರಸಾದವ ಕೊಳಬಲ್ಲ,
ಕೂಡಲಚೆನ್ನಸಂಗಾ ನಿಮ್ಮ ಶರಣ.
Art
Manuscript
Music
Courtesy:
Transliteration
Ādhāra, liṅga, nābhi madhya, nāḷa,
kandada, bayaloḷagirpa
sūkṣmāgniyanu vyāvr̥ttiyindūrdhvamukhakke tandu
dhruvamaṇḍalada mēle nilisi,
prabhāmaṇḍaladoḷage hoḷeva prāṇaliṅgakke
namacakramadhyadallirpa amr̥tavanu,
arpitava māḍi prasādava koḷaballa,
kūḍalacennasaṅgā nim'ma śaraṇa.