Index   ವಚನ - 1020    Search  
 
ಆಪ್ಯ ತ್ರಿವಿಧಾರ್ಪಿತವು ಲಿಂಗಮುಖದಲ್ಲಿ ಪ್ರಸಾದವಾಯಿತ್ತೆಂಬೆ. ಅವಸರ ಅನವಸರ ಆತ್ಮಲಿಂಗಮುಖದಲ್ಲಿ ಅರ್ಪಿತವೆರಡಾಗಿ ಪ್ರಸಾದವಾಯಿತ್ತೆಂಬೆ. ಅವಸರ ಅನವಸರ ಉಭಯಕುಲವರಿದು ಅರ್ಪಿಸಬಲ್ಲಡೆ ಪ್ರಸಾದಿ ಎಂಬೆ. `ಲಿಂಗಸ್ಯಾವಸರೇ ಯತ್ತು ದದ್ಯಾತ್ತತ್ತಸುಖದಂ ಭವೇತ್' ಇದು ಕಾರಣ, ಕೂಡಲಚೆನ್ನಸಂಗಯ್ಯಾ, ಲಿಂಗಮುಖವರಿದ ಅರ್ಪಿತ ಅಪೂರ್ವ.