Index   ವಚನ - 1090    Search  
 
ಒಕ್ಕುದ ಪ್ರಸಾದವೆಂದಿಕ್ಕುವಾತನನಾಚಾರಿ; ಕೊಂಬುವಾತ ನೆಟ್ಟನೆ ವ್ರತಗೇಡಿ. ಪ್ರಸಾದವೆಂಬುದು ಹೆಸರಿಲ್ಲದ ಘನವು! ಪ್ರಸಾದಿಯಾದಾತ ಶೂನ್ಯಶರಣ, ಇರವೆ ಲಿಂಗೈಕ್ಯ, ಪರವೆ ಪ್ರಸಾದ! ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ ಗುರುವೆಂಬ ಓಗರಕ್ಕೆ ಶಿಷ್ಯನೆಂಬ ಪ್ರಸಾದ.