Index   ವಚನ - 1123    Search  
 
ಕಲ್ಪಿಸಿ ಅರ್ಪಿಸಲಿಲ್ಲ, ಭೋಗಿಸಲಿಲ್ಲ, ಅರ್ಪಿತ ಅನರ್ಪಿತವೆಂಬೆರಡನಳಿದನಾಗಿ. ಕಾಯದ ಕೈಗಳ ಕೈಯೆ, ಭಾವದ ಕೈಗಳ ಕೈಯೆ ಅರ್ಪಿಸುವನಲ್ಲ! ಆತ ಅರ್ಪಿತ ತಾನಾಗಿ. ಅರ್ಪಿತ ಅನರ್ಪಿತವೆಂಬ ಸಂದೇಹವಳಿದುಳಿದನು. ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣಂಗೆ ಪ್ರಸಾದವೆ ಪ್ರಳಯವಾಯಿತ್ತು.