Index   ವಚನ - 1131    Search  
 
ಕಾಯ ಒಂದು, ಪ್ರಾಣ ಒಂದು, ಭಾವ ಒಂದು, ನಿರ್ಭಾವ ಒಂದು, ಒಂದಲ್ಲದೆ ಎರಡುಂಟೆ? ಗುರು ಒಂದು, ಲಿಂಗ ಒಂದು, ಉಪದೇಶ ಒಂದು. ಕೂಡಲಚೆನ್ನಸಂಗಯ್ಯನ ಶರಣ ಬಸವಣ್ಣನ ಗರುಡಿಯಲ್ಲಿ ಇಬ್ಬರಿಗೆಯೂ ಅಭ್ಯಾಸ ಒಂದೆ ಕಾಣಾ ಪ್ರಭುವೆ.