Index   ವಚನ - 1142    Search  
 
ಕಾಯವೆಂಬ ಕಣ್ಣಡವಿಲ್ಲ ಪ್ರಾಣವಿಲ್ಲಾಗಿ, ಮನವೆಂಬ ನೆನಹಿಲ್ಲ ಅನುಭಾವವಿಲ್ಲವಾಗಿ, ಅರುಹೆಂಬ ಕುರುಹಿಲ್ಲ ಪ್ರತಿಯಿಲ್ಲವಾಗಿ, ಕೂಡಲಚೆನ್ನಸಂಗಮದೇವರಲ್ಲಿ ಪ್ರಭುದೇವರ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು ಕಾಣಾ, ಸಿದ್ಧರಾಮಯ್ಯಾ.