Index   ವಚನ - 1145    Search  
 
ಕಾಲ ಕಲ್ಪಿತಂಗಳಿಲ್ಲದೆ ನಿಮ್ಮಿಂದ ನೀವೇ ಸ್ವಯಂಭುವಾಗಿರ್ದಿರಯ್ಯಾ. ನಿಮ್ಮ ಪರಮಾನಂದ ಪ್ರಭಾವದ ಪರಿಣಾಮದಲ್ಲಿ ಅನಂತಕಾಲವಿರ್ದಿರಲ್ಲಾ! ನಿಮ್ಮ ಆದ್ಯಂತವ ನೀವೇ ಅರಿವುತಿದ್ದಿರಲ್ಲಾ, ನಿಮ್ಮ ನಿಜದುದಯವ ನೀವೇ ಬಲ್ಲಿರಿ ಕೂಡಲಚೆನ್ನಸಂಗಮದೇವಾ.