Index   ವಚನ - 1155    Search  
 
ಕೂಟಕಿಕ್ಕಿ ಮಾಡುವರೆಲ್ಲಾ ಕುಂಟಣಗಿತ್ತಿಯ ಮಕ್ಕಳು, ಹರಸಿಕೊಂಡು ಮಾಡುವರೆಲ್ಲಾ ಹಾದರಗಿತ್ತಿಯ ಮಕ್ಕಳು, ವರ್ಷಕ್ಕೊಂದು ತಿಥಿಯೆಂದು ಮಾಡುವರೆಲ್ಲಾ ವೇಶಿಯ ಮಕ್ಕಳು, ಆ ಕೂಟಕ್ಕೆ ಮಾಡದೆ, ಹರಸಿಕೊಂಡು ಮಾಡದೆ, ವರ್ಷಕ್ಕೊಂದು ತಿಥಿಯೆಂದು ಮಾಡದೆ, ಸಹಜದಲ್ಲಿ ಮಾಡುವರೆಲ್ಲಾ ಸಜ್ಜನ ಪತಿವ್ರತೆಯ ಮಕ್ಕಳು ಕಾಣಾ, ಕೂಡಲಚೆನ್ನಸಂಗಮದೇವಾ.