Index   ವಚನ - 1166    Search  
 
ಕ್ರಿಯೆ ಜಡವೆಂಬರು, ಜ್ಞಾನ ಅಜಡವೆಂಬರು ಅದೆಂತಯ್ಯಾ? ನೀತಿಯ ಹೇಳಿದುದು ಜಡವೆ? ಕಷ್ಟವಿಲ್ಲದೆ ಬಂದಂತೆ ಬೊಗಳಿ ಭೋಗಿಸಿ ಭವಕ್ಕೆ ಹೋಗುವುದು ಅಜಡವೆ? ಕ್ರಿಯಾ-ಜ್ಞಾನವೆಂಬ ಉಭಯ ಶಬ್ದಾರ್ಥವನರಿಯದೆ ಕಂಡ ಕಂಡ ಹಾಗೆ ಬೊಗಳುವ ಹೊಲೆಮಾದಿಗರನು ಏನೆಂಬೆ ಕೂಡಲಚೆನ್ನಸಂಗಮದೇವಾ.