Index   ವಚನ - 1188    Search  
 
ಗುರು ನಷ್ಟವಾದಡೆ ಜಂಗಮವೇ ಗುರು. ಭಕ್ತ ಗುರುವಾದಡೆ ಆ ಗುರು ಶಿಷ್ಯರಿಬ್ಬರೂ ಅನಾಚಾರಿಗಳು. ಗುರು ನಷ್ಟವಾದಡೆ ಜಂಗಮ ಗುರುವಾಗಬಹುದಲ್ಲದೆ, ಭಕ್ತ ಗುರುವಾಗಬಲ್ಲನೆ? ಬಾರದು. ಅದೇಕೆಂದಡೆ; ಭೃತ್ಯಂಗೆ ಕರ್ತೃತ್ವವುಂಟೇ? ಇಲ್ಲವಾಗಿ, ಆವಿಗೆ ತನೆಯಹುದೆ, ಬಸವಗಲ್ಲದೆ? ಇದು ಕಾರಣ, ಕೂಡಲಚೆನ್ನಸಂಗಮದೇವಾ ಗುರುವಿನ ಗುರು, ಪರಮಗುರು, ಜಂಗಮ.