Index   ವಚನ - 1206    Search  
 
ಗುರುವಾದರು ಕೇಳಲೆಬೇಕು, ಲಿಂಗವಾದರು ಕೇಳಲೆಬೇಕು, ಜಂಗಮವಾದರು ಕೇಳಲೆಬೇಕು ಪಾದೋದಕವಾದರು ಕೇಳಲೆಬೇಕು ಪ್ರಸಾದವಾದರು ಕೇಳಲೆಬೇಕು. ಕೇಳದೆ, ಹುಸಿ ಕೊಲೆ ಕಳವು ಪಾರದ್ವಾರ ಪರಧನ ಪರಸತಿಗಳಿಪುವ ಭಕ್ತ ಜಂಗಮವೊಂದೇಯೆಂದು ಏಕೀಕರಿಸಿ ನುಡಿದರೆ ಆ ಭಕ್ತ ಭಕ್ತಸ್ಥಳಕ್ಕೆ ಸಲ್ಲ, ಆ ಜಂಗಮ ಮುಕ್ತಿಸ್ಥಳಕ್ಕೆ ಸಲ್ಲ, ಕೂಡಲಚೆನ್ನಸಂಗಮದೇವ ಸಾಕ್ಷಿಯಾಗಿ ಇವರು ಕಾಗೆಯ ಬಳಗವೆಂದೆ.