Index   ವಚನ - 1209    Search  
 
ಗುರುವಿನಲ್ಲಿ ಗುಣವನರಸುವರೆ? ಲಿಂಗದಲ್ಲಿ ಲಕ್ಷಣವನರಸುವರೆ? ಜಂಗಮದಲ್ಲಿ ಜಾತಿಯನರಸುವರೆ? ಅರಸಿದರೆ ನಾಯಕನರಕ ತಪ್ಪದು ಕೂಡಲಚೆನ್ನಸಂಗಮದೇವಾ.