Index   ವಚನ - 1238    Search  
 
ಜಂಗಮದ ಪಾದತೀರ್ಥ ಪ್ರಸಾದವ ಲಿಂಗಕ್ಕೆ ಕೊಟ್ಟು ಕೊಳಬಾರದು ಎಂಬಾತನು ಲಿಂಗದ್ರೋಹಿ, ಜಂಗಮದ್ರೋಹಿ, ಪಾದೋದಕ ಪ್ರಸಾದದ್ರೋಹಿಯಾದ ಚಾಂಡಾಲರ ಮುಖವ ನೋಡಲಾಗದು. ನೋಡಿದಡೆ ನಾಯಕನರಕ ತಪ್ಪದು ಕೂಡಲಚೆನ್ನಸಂಗಮದೇವಾ.