Index   ವಚನ - 1246    Search  
 
ಜಂಗಮವ ಜರಿದು, ಲಿಂಗವ ಮ[ರೆದು] ಅಂಗಹೀನನಾದ ಬಳಿಕ ಸಂಗಸಂಯೋಗ ಎಲ್ಲಿಯದೋ ಅಯ್ಯಾ? ಜಂಗಮ ಮೋಹಿ ಜರಿಯಬಲ್ಲನೆ? ಲಿಂಗಮೋಹಿ ಮರೆಯಬಲ್ಲನೆ? ಜಾತಿಕಾರ ಭಂಡರ ಮೆಚ್ಚುವನೆ? ನಮ್ಮ ಜಾತ ಅಜಾತ ಕೂಡಲಚೆನ್ನಸಂಗಮದೇವಯ್ಯ.