Index   ವಚನ - 1283    Search  
 
ತನು ಬಯಲು ನಿರವಯದೊಳಡಗಿತ್ತು; ಮನ ಬಯಲು ನಿರವಯದೊಳಡಗಿತ್ತು; ಭಾವ ಬಯಲು ನಿರವಯದೊಳಡಗಿತ್ತು; ಬಯಲು ಬಯಲು ಬೆರಸಿ ಬಯಲೆ ಆಯಿತ್ತು! ಕೂಡಲಚೆನ್ನಸಂಗಯ್ಯನೆಂಬ ನುಡಿಯಡಗಿತ್ತು.