Index   ವಚನ - 1288    Search  
 
ತನುವಿನ ಸೂತಕ, ಮನದ ಸಂಚಲ, ಜೀವನ ಕಳವಳ; ಹಿಂಗಿದುವಯ್ಯಾ ಗುರುಕರುಣವ ಪಡೆದೆನಾಗಿ, ಕೂಡಲಚೆನ್ನಸಂಗಮದೇವಾ ಎನ್ನ ಭಾವಭ್ರಾಂತಿಯಳಿಯಿತ್ತು, ನೀವೆಂದರಿದೆನಾಗಿ.