Index   ವಚನ - 1301    Search  
 
ತೆರಹಿಲ್ಲದ ಘನವು ಭಿನ್ನವಾಯಿತ್ತೆಂದು ತನುವಿನ ಮೇಲೆ ಶಸ್ತ್ರವನಿಕ್ಕಿಕೊಂಬ ಶಿವದ್ರೋಹಿಯ ಮುಖವ ನೋಡಲಾಗದು, ಕಲುಕುಟಿಗ ಮುಟ್ಟಿ ಚಕ್ಕೇಳುವಾಗ, ಪ್ರಾಣಲಿಂಗ ಭಿನ್ನವಾಯಿತ್ತೆ? ಭಾವಲಿಂಗ ಭಿನ್ನವಾಯಿತ್ತೆ? ಪೂಜಾಲಿಂಗ ಭಿನ್ನವಾಯಿತ್ತಲ್ಲದೆ, ಇಂತೀ ನಿರಾಳದ ನೆಲೆಯ ಸೋಂಕನಾರೂ ಅರಿಯರು. ಇಷ್ಟಲಿಂಗ ಬಿದ್ದಿತ್ತೆಂಬ ಕಷ್ಟವ ನೋಡಾ ಕೂಡಲಚೆನ್ನಸಂಗಮದೇವಾ.